ಉಧ್ಯಾನನಗರ, ತಂತ್ರಜ್ಞಾನನಗರವೆಂಬ ನಾಮಾಂಕಿತದಿಂದ ಹೆಸರು ಪಡೆದ ಬೆಂಗಳೂರನ್ನು ಸ್ವಚ್ಚ ಮತ್ತು ಹಸಿರು ನಗರವನ್ನಾಗಿ ಪರಿವರ್ತಿಸಲು ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ. ಡಿ.ಕೆ.ಶಿವಕುಮಾರ್ ರವರು ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಉಳಿಸಿಕೊಳ್ಳಲು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 155ನೇ ಜನ್ಮ ದಿನವಾದ ಅಕ್ಟೊಂಬರ್-2ರಂದು ಬೆಂಗಳೂರನ್ನು ಸ್ವಚ್ಚವಾಗಿರಿಸುವ ಮತ್ತು ಹಸಿರೀಕರಣಗೊಳಿಸುವ ಉಪ ಕ್ರಮಗಳನ್ನು ಕೈಗೊಳ್ಳುವ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾಗರೀಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಮೂಲಕ ಮುಂದಿನ ಪೀಳಿಗೆಗೆ ಬೆಂಗಳೂರನ್ನು ಸ್ವಚ್ಚ ಮತ್ತು ಹಸಿರು ನಗರವನ್ನಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿರುವುದರಿಂದ, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಸಕ್ರೀಯವಾಗಿರಿಸೋಣ.
ಮುಂದಿನ ಪೀಳಿಗೆಯ ಉಳಿವಿಗಾಗಿ ಹಸಿರೇ-ಉಸಿರು ಎಂಬ ಧ್ಯೇಯವನ್ನು ಉಳಿಸಿ ಬೆಳೆಸಲು ಸ್ವಚ್ಚ ವಾತಾವರಣ, ಪರಿಶುದ್ಧ ಕುಡಿಯುವ ನೀರು, ಮಲಿನ ಮುಕ್ತ ಗಾಳಿ ಸ್ವಚ್ಚ ಸುಂದರ ಉದ್ಯಾನವನಗಳು ಶುದ್ಧ ನೀರನ್ನೊಳಗೊಂಡ ಕೆರೆಗಳನ್ನು ಉಳಿಸಿ ಮುಂದಿನ ಪೀಳಿಗೆಯ ಶ್ರೇಯೋಭಿವೃದ್ಧಿಗೆ ಕಂಕಂಣ ಬದ್ಧರಾಗಬೇಕಾಗಿರುವುದು ನಮ್ಮೆಲರ ಜವಬ್ದಾರಿಯಾಗಿದೆ.