ಉಧ್ಯಾನನಗರ, ತಂತ್ರಜ್ಞಾನನಗರವೆಂಬ ನಾಮಾಂಕಿತದಿಂದ ಹೆಸರು ಪಡೆದ ಬೆಂಗಳೂರನ್ನು ಸ್ವಚ್ಚ ಮತ್ತು ಹಸಿರು ನಗರವನ್ನಾಗಿ ಪರಿವರ್ತಿಸಲು ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ. ಡಿ.ಕೆ.ಶಿವಕುಮಾರ್ ರವರು ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಉಳಿಸಿಕೊಳ್ಳಲು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 155ನೇ ಜನ್ಮ ದಿನವಾದ ಅಕ್ಟೊಂಬರ್-2ರಂದು ಬೆಂಗಳೂರನ್ನು ಸ್ವಚ್ಚವಾಗಿರಿಸುವ ಮತ್ತು ಹಸಿರೀಕರಣಗೊಳಿಸುವ ಉಪ ಕ್ರಮಗಳನ್ನು ಕೈಗೊಳ್ಳುವ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾಗರೀಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಮೂಲಕ ಮುಂದಿನ ಪೀಳಿಗೆಗೆ ಬೆಂಗಳೂರನ್ನು ಸ್ವಚ್ಚ ಮತ್ತು ಹಸಿರು ನಗರವನ್ನಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿರುವುದರಿಂದ, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಸಕ್ರೀಯವಾಗಿರಿಸೋಣ.
ಹೆಚ್ಚಿನ ಮಾಹಿತಿಗಾಗಿವಿದ್ಯಾರ್ಥಿಗಳು ತಮ್ಮ ಭಾಷಣವನ್ನು ರೆಕಾರ್ಡ್ ಮಾಡಿ, ವೀಡಿಯೊವನ್ನು ಸಲ್ಲಿಸಬೇಕು. ವೀಡಿಯೊ ನಿರ್ದಿಷ್ಟಪಡಿಸಿದ ಅವಧಿಯನ್ನು ಮೀರಬಾರದು.
ಹೆಚ್ಚಿನ ಮಾಹಿತಿಗಾಗಿಕರ್ನಾಟಕ ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ಸ್ವಚ್ಛ ಮತ್ತು ಹಸಿರು ಬೆಂಗಳೂರನ್ನು ನಿರ್ಮಿಸಲು ಸನ್ನದ್ದರಾಗಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮ ದಿನಾಚರಣೆಯಂದು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರು ಬೆಂಗಳೂರನ್ನು ಸ್ವಚ್ಛ ಮತ್ತು ಹಸಿರು ಮಾಡುವ ಪ್ರತಿಜ್ಞಾ ವಿಧಿಯನ್ನು ನೆರವೇರಿಸಲಿದ್ದಾರೆ.
ತಳಮಟ್ಟದಿಂದ ಸ್ವಚ್ಛತೆಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಲು “ಸ್ವಚ್ಚತೆಯೇ ಸೇವೆ” ಎಂಬ ದ್ಯೇಯ ವಾಕ್ಯದ ಅಡಿಯಲ್ಲಿ ಬೆಂಗಳೂರಿನಾದ್ಯಂತ ಅನೇಕ ಶಾಲೆಗಳು ಸ್ವಚ್ಛ ಮತ್ತು ಹಸಿರು ಬೆಂಗಳೂರು ಪ್ರತಿಜ್ಞೆಯಲ್ಲಿ ಭಾಗವಹಿಸುತ್ತಿವೆ. ವಿದ್ಯಾರ್ಥಿಗಳು ವಾಸ್ತವಿಕವಾಗಿ (Virtual) ಪ್ರತಿಜ್ಞೆಯನ್ನು ಸ್ವೀಕರಿಸಲು ಸೇರುತ್ತಿದ್ದಾರೆ.
ಬೆಂಗಳೂರಿನ ಶುಚಿತ್ವವನ್ನು ಕಾಪಾಡಲು ಸಮರ್ಪಿತವಾಗಿರುವ ನಾಗರಿಕರನ್ನು ವಾಸ್ತವಿಕವಾಗಿ (Virtual) ಪ್ರತಿಜ್ಞೆಗೆ ಸೇರಲು ಪ್ರೋತ್ಸಾಹಿಸಲಾಗುತ್ತದೆ. ನಗರದ ಜನಸಂಖ್ಯೆಯು ಹೆಚ್ಚುತ್ತಿರುವಾಗ, ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸ್ವಚ್ಛ ಮತ್ತು ಹಸಿರು ಬೆಂಗಳೂರಿಗಾಗಿ ಪರಿಣಾಮಕಾರಿ ವಿಚಾರಗಳನ್ನು ಪ್ರಸ್ತಾಪಿಸುವುದು ಅತ್ಯಗತ್ಯ.